Simple lyrics to remind us — any of us with whatever failings — to recall, reflect and realize God. Purandara Dasa is no match to anyone, when it comes to crafting lyrics that even a layperson can relate to.
[Note: In the MS rendition linked to this post, the second stanza is not presented].
... ♫ ♫ ♫ ♫ ...
ಕಲಿಯುಗದಲಿ ಹರಿನಾಮವ ನೆನೆದರೆ ಕುಲಕೋಟಿಗಳು ಉದ್ಧರಿಸುವವೋ ರಂಗಾ
ಸುಲಭದ ಮುಕುತಿಗೆ ಸುಲಭನೆಂದೆನಿಸುವ ಜಲರುಹನಾಭನ ನೆನೆ ಮನವೇ
ಸುಲಭದ ಮುಕುತಿಗೆ ಸುಲಭನೆಂದೆನಿಸುವ ಜಲರುಹನಾಭನ ನೆನೆ ಮನವೇ
... ♫ ♫ ♫ ♫ ...
ಸ್ನಾನವನರಿಯೆ ಮೌನವನರಿಯೆ ಧ್ಯಾನವನರಿಯೆಂದೆನಬೇಡ
ಜಾನಕಿವಲ್ಲಭ ದಶರಥನಂದನ ಗಾನವಿನೋದನ ನೆನೆ ಮನವೇ
ಜಾನಕಿವಲ್ಲಭ ದಶರಥನಂದನ ಗಾನವಿನೋದನ ನೆನೆ ಮನವೇ
... ♫ ♫ ♫ ♫ ...
ಅರ್ಚಿಸಲರಿಯೆ ಮೆಚ್ಚಿಸಲರಿಯೆ ತುಚ್ಛನಾನೆಂದೆನಬೇಡ
ಅಚ್ಯುತಾನಂದ ಗೋವಿಂದ ಮುಕುಂದನ ಇಚ್ಛೆಯಿಂದಲಿ ನೆನೆ ಮನವೇ
ಅಚ್ಯುತಾನಂದ ಗೋವಿಂದ ಮುಕುಂದನ ಇಚ್ಛೆಯಿಂದಲಿ ನೆನೆ ಮನವೇ
... ♫ ♫ ♫ ♫ ...
ಜಪವೊಂದರಿಯೆ ತಪವೊಂದರಿಯೆ ಉಪದೇಶವಿಲ್ಲೆಂದೆನಬೇಡ
ಅಪಾರಮಹಿಮ ಶ್ರೀ ಪುರಂದರ ವಿಠಲನ ಉಪಾಯದಿಂದಲಿ ನೆನೆ ಮನವೇ
ಅಪಾರಮಹಿಮ ಶ್ರೀ ಪುರಂದರ ವಿಠಲನ ಉಪಾಯದಿಂದಲಿ ನೆನೆ ಮನವೇ
No comments:
Post a Comment