A devotional composition by ಪುರಂದರದಾಸ.
The lyrics on the web are somewhat conflicting and I have, therefore, not provided any links to transliterations and have provided my own transliteration from listening to Bhimsen Joshi's rendering.
Another ♫दरबारी कानडा feast.

... ♫ ♫ ♫ ♫ ...
ನಾ ನಿನ್ನ ಧ್ಯಾನದೊಳು ಇರಲು ಸದಾ ಮಿಕ್ಕ
ಮಾನವರೇನು ಮಾಡುವರೋ ಪರ
ಮತ್ಸರಿಸಿದರೇನು ಮಾಡಲಾಕರು ಎನ್ನ
ಅಚ್ಯುತ ನಿನ್ನಯ ಕೃಪೆಯಿರಲೂ
ನಿತ್ಯವು ನಿನ್ನಯ ನಾಮವ ಜಪಿಸಲು
ಕಿಚ್ಚಿಗೆ ಇರುವೆ ಮುತ್ತುವುವೇ ರಂಗಾ || ನಾ ನಿನ್ನ ... ||
ಗಾಳಿಲಿ ಕುದುರೆ ವೈಯ್ಯಾರದಿ ತಿರುಗಲು
ಧೂಳದು ರವಿಗೆ ತಾ ಮುಸುಕುವದೇ
ತಾಳಿದವರಿಗೆ ವಿರುದ್ಧ ಲೋಕದೊಳುಂಟೆ
ಗಾಳಿಗೆ ಗಿರಿ ನಡುಗುವದೇ ಹೇಳೆಲೋ ರಂಗಾ || ನಾ ನಿನ್ನ ... ||
ಕನ್ನಡಿಯೊಳಗಣ ಗಂಟು ಕಂಡು ಕಳ್ಳ
ಕಣ್ಣವಿಕ್ಕಲು ಅವನ ವಶವಹುದೇ
ನಿನ್ನ ನಂಬಿದೆ ನೀ ಎನ್ನ ಸಲಹಬೇಕೋ
ಪನ್ನಗ ಶಯನ ಶ್ರೀ ಪುರಂದರ ವಿಠ್ಠಲಾ ... || ನಾ ನಿನ್ನ ... ||
No comments:
Post a Comment