Monday, July 02, 2012

ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ

Tricky recursive use of words to describe God, by Kanakadaasa.



... ♫ ♫ ♫ ♫ ...
[ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ] - 2
[ನೀ ದೇಹದೊಳಗೋ, ನಿನ್ನೊಳು ದೇಹವೋ?] - 2

... ♫ ♫ ♫ ♫ ...
[ಬಯಲು ಆಲಯದೊಳಗೋ, ಆಲಯವು ಬಯಲೊಳಗೋ?] - 2
ಬಯಲು ಆಲಯವೆರಡೂ, ನಯನದೊಳಗೋ? ನಯನದೊಳಗೋ?
[ನಯನ ಬುಧ್ಧಿಯ ಒಳಗೋ, ಬುಧ್ಧಿ ನಯನದ ಒಳಗೋ?] - 2
ನಯನ ಬುಧ್ಧಿಗಳೆರಡೂ ನಿನ್ನೊಳಗೋ, ಕೃಷ್ಣಾ?
... ♫ ♫ ...
ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ
ನೀ ದೇಹದೊಳಗೋ, ನಿನ್ನೊಳು ದೇಹವೋ?

... ♫ ♫ ♫ ♫ ...
[ಸವಿಯು ಸಕ್ಕರೆಯೊಳಗೋ, ಸಕ್ಕರೆಯು ಸವಿಯೊಳಗೋ?] - 2
ಸವಿಯು ಸಕ್ಕರೆಯರಡೂ ಜಿಹ್ವೆಯೊಳಗೋ? ಜಿಹ್ವೆಯೊಳಗೋ?
[ಜಿಹ್ವೆ ಮನಸಿನ ಒಳಗೋ, ಮನಸು ಜಿಹ್ವೆಯ ಒಳಗೋ?] - 2
ಜಿಹ್ವೆ ಮನಸುಗಳೆರಡೂ ನಿನ್ನೊಳಗೋ, ಕೃಷ್ಣಾ?
... ♫ ♫ ...
ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ
ನೀ ದೇಹದೊಳಗೋ, ನಿನ್ನೊಳು ದೇಹವೋ?

... ♫ ♫ ♫ ♫ ...
[ಕುಸುಮದಲಿ ಗಂಧವೋ, ಗಂಧದಲಿ ಕುಸುಮವೋ?] - 2
ಕಸುಮ ಗಂಧಗಳೆರಡೂ ಆಘ್ರಾಣದೊಳಗೋ? ಆಘ್ರಾಣದೊಳಗೋ?
[ಅಸಮಭವ ಕಾಗಿನೆಲೆಯಾದಿಕೇಶವರಾಯ] - 2
ಉದುರೆಲ್ಲೆನಳವಲ್ಲ ಎಲ್ಲ ನಿನ್ನೊಳಗೊ, ಕೃಷ್ಣಾ
... ♫ ♫ ...
ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ
ನೀ ದೇಹದೊಳಗೋ, ನಿನ್ನೊಳು ದೇಹವೋ?
ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ
ನಿನ್ನೊಳು ಮಾಯೆಯೋ, ನಿನ್ನೊಳು ಮಾಯೆಯೋ

No comments: