Friday, October 31, 2008

ನಿನ್ನಿಂದಲೇ ... "ಮಿಲನ" ಚಿತ್ರದಿಂದ.

ಇದು ಇನ್ನೊಂದು ಗೀತೆ — 4:13 ನಿಮಿಷ ಉದ್ದ — ಮನೋ ಮೂರ್ತಿ ಸಂಗೀತ ಮತ್ತು ಸೋನು ನಿಗಮ್ ಹಾಡುಗೆ, ಮಿಲನ ಚಿತ್ರದಿಂದ [CR, IE]:



ಈ ಕೆಳಗೆ karaoke ಹಾಡು — 4:54 ನಿಮಿಷ ಉದ್ದ — ಕೇಳಬಹುದು [IE]:



ಕೆಳಗಿರುವ ಸಾಹಿತ್ಯವನ್ನು ಮೇಲಿರುವ karaoke ಧ್ವನಿಗೆ ಅಳವಡಿಸಲು ಪ್ರಯತ್ನಪಟ್ಟಿದ್ದೇನೆ:




[0:10, 0:06]
ಹೇ ಹೇ ಹೇ ... ಆಹಾಹ
ತನನಾನ ತನನಾನ ತನನಾನನಾ

[0:25, 0:21]
ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲೇ ನೀ ಹೀಗೆ ಬಂದಾಗಲೇ
ನಿನ್ನ ತುಟಿಯಲ್ಲಿ ನಗುವಾಗುವಾ ಹಂಬಲ
ನಾ ನಿಂತಲ್ಲೇ ಹಾಲಾದೆ ನಿನ್ನಿಂದಲೇ
ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ ಆ .. ಆ..
ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ
ಆಆಆಆ.. ಆಆಆಆ.. ಆಆಆಆ..
[1:49, 2:00]
ಇರುಳಲ್ಲಿ ಜ್ವರದಂತೆ ಕಾಡಿ ಈಗ
ಹಾಯಾಗಿ ನಿಂತಿರುವೆ ಸರಿಯೇನು
ಬೇಕಂತಲೇ ಮಾಡಿ ಏನೋ ಮೋಡಿ
ಇನ್ನೆಲ್ಲೋ ನೋಡುವ ಪರಿಯೇನು
ಈ ಮಾಯೆಗೆ ಈ ಮರುಳಿಗೆ ನಿನ್ನಿಂದ ಕಳೆ ಬಂದಿದೆ ಆ .. ಆ..
ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ

[2:32, ]
ಆಆಆಆ.. ಆಆಆಆ..
[2:54, ]
ಹೇ ಹೇ ಹೇ ... ಆಹಾಹ
ತನನಾನ ನನನಾನ ತನನಾನನಾ

[2:57, ]
ಹೋದಲ್ಲಿ ಬಂದಲ್ಲಿ ಎಲ್ಲಾ ನಿನ್ನ
ಸೊಂಪಾದ ಚೆಲುವಿನ ಗುಣಗಾನ
ಕೇದಿಗೆ ಗರಿಯಂಥಾ ನಿನ್ನಾ ನೋಟ
ನನಗೇನೋ ಅಂದಂತೆ ಅನುಮಾನ
ಕಣ್ಣಿಂದಲೇ ಸದ್ದಿಲ್ಲದೇ ಮುದ್ದಾದ ಕರೆ ಬಂದಿದೆ
ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲೇ ನೀ ಹೀಗೆ ಬಂದಾಗಲೇ
ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ
ನಾ ನಿಂತಲ್ಲೇ ಹಾಲಾದೆ ನಿನ್ನಿಂದಲೇ
ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ ಆ .. ಆ..
ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ

2 comments:

krbabu said...

ನಿಮಗೆ ತಮಾಷೆ ಇಷ್ಟವಾದಲ್ಲಿ, ಈ ಹಾಡಿನ parodyಯನ್ನು ಇಲ್ಲಿ ಓದಿ.

krbabu said...

ಇನ್ನೊಂದು parodyಯನ್ನು ಈ ಜಾಗದಲ್ಲಿ ಓದಬಹುದು.