ಈಗ್ಗೆ ಕೆಲವು ದಿವಸಗಳ ಹಿಂದೆ ಈ 'ಮುಂಗಾರು ಮಳೆ' ಚಿತ್ರದ ಹಾಡಿನ ಇರುವಿಕೆ ನನಗೆ ಗೊತ್ತಾಯಿತು. ಈ ಹಾಡನ್ನು ಕೇಳಿ ಅದರ ಸಾಹಿತ್ಯವನ್ನು ಬರೆದಿದ್ದೇನೆ. ಇದನ್ನು ಓದಿ ಸಂತೋಷಪಡಿ.ಗಂಡಸಿನ ಧ್ವನಿಯನ್ನು ನೀಲಿ ಬಣ್ಣದಲ್ಲೂಹೆಂಗಸಿನ ಧ್ವನಿಯನ್ನು ಕೆಂಪು ಬಣ್ಣದಲ್ಲೂ ಪ್ರಕಟಿಸಿದ್ದೇನೆ.
ಅನಿಸುತಿದೆ ಯಾಕೋ ಇಂದು
ನೀನೇನೆ ನನ್ನವಳೆಂದು
ಮಾಯದಾ ಲೋಕದಿಂದ
ನನಗಾಗೆ ಬಂದವಳೆಂದು
ಆಹಾ, ಎಂಥ ಮಧುರಾ, ಯಾತನೇ
ಕೊಲ್ಲು ಹುಡುಗಿ ಒಮ್ಮೆ ನನ್ನಾ ... ಹಾಗೇ ಸುಮ್ಮನೇ
ಅನಿಸುತಿದೆ ಯಾಕೋ ಇಂದು ...
ಸುರಿಯುವ ಸೋನೆಯೂ ಸೂಸಿದೆ ನಿನ್ನದೇ ಪರಿಮಳಾ
ಇನ್ನ್ಯಾರ ಕನಸಲೂ ನೀನು ಹೋದರೆ ತಳಮಳಾ
ಪೂರ್ಣ ಚಂದಿರಾ ರಜಾ ಹಾಕಿದ
ನಿನ್ನಯ ಮೊಗವನು ಕಂಡ ಕ್ಷಣಾ
ನಾ ಖೈದಿ ನೀನೆ ಸೆರೆಮನೆ
ತಬ್ಬಿ ನನ್ನ ಅಪ್ಪಿಕೊ ಒಮ್ಮೆ ... ಹಾಗೇ ಸುಮ್ಮನೇ
ಅನಿಸುತಿದೆ ಯಾಕೋ ಇಂದು ...
ತುಟಿಗಳ ಹೂವಲೀ ಆಡದ ಮಾತಿನ ಸಿಹಿಯಿದೆ
ಮನಸಿನ ಪುಟದಲೀ ಕೇವಲ ನಿನ್ನದೆ ಸಹಿಯಿದೆ
ಹಣೆಯಲಿ ಬರೆಯದ ನಿನ್ನ ಹೆಸರಾ
ಹೃದಯದಿ ನಾನೇ ಕೊರೆದಿರುವೆ
ನಿನಗುಂಟೆ ಇದರಾ ಕಲ್ಪನೇ
ನನ್ನ ಹೆಸರ ಕೂಗೆ ಒಮ್ಮೆ ... ಹಾಗೇ ಸುಮ್ಮನೇ ...
ಅನಿಸುತಿದೆ ಯಾಕೋ ಇಂದು ...
ನೀನೇನೆ ನನ್ನವಳೆಂದು ...
ಮಾಯದಾ ಲೋಕದಿಂದ
ನನಗಾಗೆ ಬಂದವಳೆಂದು
ಆಹಾ, ಎಂಥ ಮಧುರಾ, ಯಾತನೇ
ಕೊಲ್ಲು ಹುಡುಗಿ ಒಮ್ಮೆ ನನ್ನ ... ಹಾಗೇ ಸುಮ್ಮನೇ
ಅರಳುತಿರು ಜೀವದ ಗೆಳೆಯಾ ...
ಸ್ನೇಹದಾ ಸಿಂಚನದಲ್ಲೀ ...
ಬಾಡದಿರು ಸ್ನೇಹದ ಹೂವೇ
ಪ್ರೇಮದಾ ಬಂಧನದಲ್ಲೀ
ಮನಸಲ್ಲೇ ಇರಲಿ ಭಾವನೇ
ಮಿಡಿಯುತಿರಲಿ ಮೌನವೇನೇ ... ಹೀಗೆ ಸುಮ್ಮನೇ
ಅರಳುತಿರು ಜೀವದ ಗೆಳೆಯಾ ...
ಕಡೆಯದಾಗಿ, ಈ ಹಾಡನ್ನು ಕೇಳುವುದಕ್ಕೆ ಮಾತ್ರ ನಿಮ್ಮ ಇಷ್ಟ ಇದ್ದರೆ ಇಲ್ಲಿ ಕೇಳಬಹುದು [ಇದರಲ್ಲಿ ಕೇವಲ ಗಂಡಸಿನ ಧ್ವನಿ ಮಾತ್ರ ಇದೆ].
1 comment:
You can find a Japanese singer's rendering here.
Post a Comment