Tuesday, December 06, 2011

ಅವರಿವರಾ ಜೊತೆ ಸೇರದೇ, ಅವರಿವರಾ ನುಡಿ ಕೇಳದೇ

The song is about lovers' romantic overture to each other, although one line in the lyrics is somewhat baffling: ನನ್ನನ್ನಷ್ಟೇ ... ಸಾಯೋ ಹಾಗೆ ನೀನು ಪ್ರೀತಿಸು1. The male lover exhorts the female "to love only him ... so as to make him -- her? -- feel dead." I wonder what the lyricists had in mind. This song is penned by two lyricists: Shashank Raj and Yogaraj Bhat.

As usual in Indian movies these days, this is a dream sequence that escapes from the main story line; nevertheless, there is a certain believable aspect to it.

Why I did I have to write a blog post on this song? Sonu Nigam is the male singer, of course, and the musical interludes are quite pleasant to listen to.





... ♫ ♫ ♫ ♫ ...
Male:
ಅವರಿವರಾ ಜೊತೆ ಸೇರದೇ, ಅವರಿವರಾ ನುಡಿ ಕೇಳದೇ
ಗೆಳತಿಯರಾ ಜೊತೆ ಹೋಗದೇ, ಪರಿಚಿತರಾ ಬಳಿ ಕೂರದೇ
ನನ್ನನ್ನಷ್ಟೇ ... ಸಾಯೋ ಹಾಗೆ ನೀನು ಪ್ರೀತಿಸು
ನಿನ್ನ ಎಲ್ಲಾ ... ಆಸೆಗಳ ಸಾಲಿನಲ್ಲಿ ಎಂದೂ ನನ್ನ ಮುಂದೆ ಇರಿಸು
ಅವರಿವರಾ ಜೊತೆ ಸೇರದೇ, ಅವರಿವರಾ ನುಡಿ ಕೇಳದೇ


... ♫ ♫ ♫ ♫ ...
Female:
ನೀ ಹೇಳುವ ನಾ ಕೇಳುವ ಮಾತು ಒಂದೇ ಆಗಲಿ
ನೀನಾಡುವ ಸುಳ್ಳಲ್ಲಿಯೂ ನಾನೇ ಇರಲಿ
ನೀ ಸೋತರೂ ನಾ ಸೋತರೂ ಪ್ರೀತಿ ಎಂದೂ ಗೆಲ್ಲಲಿ
ನೀನೆನ್ನುವಾ ನಾನೆನ್ನುವಾ ಮಾತಿನ್ನೆಲ್ಲಿ


... ♫ ♫ ♫ ♫ ...
Male:
ನಗುವೆಲ್ಲಾ ನನಗಾಗೆ ಕೂಡಿ ಹಾಕೂ, ಮುನಿಸನ್ನು ಬರದಂತೆ ದೂರಾ ನೂಕೂ
ಮನಸಲ್ಲಿ ಮರೆಮಾಚಿ ಇಟ್ಟಾ ಎಲ್ಲಾ, ಗುಟ್ಟುಗಳಾ ನನ್ನೆದುರೆ ತೆರೆಯಬೇಕೂ

ನೀ ನನ್ನಾ ಹುಡುಕುವ ಗಳಿಗೆ, ನನ ನಗುವೇ ನಿನಗೆ ಸಿಗಲಿ
ಯಾರನ್ನೂ ಕರೆಯುವ ಕ್ಷಣದಿ ನನ ಹೆಸರೇ ಮೊದಲು ಬರಲಿ

ಬೇರೆ ಏನೂ ... ಯೋಚಿಸದೆ ನನ್ನ ಪ್ರೀತಿಸು
ನಿನ್ನ ಎಲ್ಲಾ ... ಆಸೆಗಳ ಸಾಲಿನಲ್ಲಿ ಎಂದೂ ನನ್ನ ಮುಂದೆ ಇರಿಸು

... ♫ ♫ ♫ ♫ ...
Female:
ನೀ ಹೇಳುವಾ, ನಾ ಕೇಳುವಾ, ಮಾತು ಒಂದೇ ಆಗಲಿ
ನೀನಾಡುವಾ ಸುಳ್ಳಲ್ಲಿಯೂ ನಾನೇ ಇರಲಿ
ನೀ ಸೋತರೂ, ನಾ ಸೋತರೂ, ಪ್ರೀತಿ ಎಂದೂ ಗೆಲ್ಲಲಿ
ನೀನೆನ್ನುವಾ ನಾನೆನ್ನುವಾ ಮಾತಿನ್ನೆಲ್ಲಿ

ನೆರಳಾಗೀ ಹಗಲೆಲ್ಲಾ ನೀನು ಬೇಕು, ಕನಸಾಗೀ ಇರುಳೆಲ್ಲಾ ಕಾಡಬೇಕೂ
ಬದುಕಲ್ಲಿ ಗುರಿಯಂತೆ ನನ್ನ ಸೇರಿ, ಅನುರಾಗ ಅನುಗಾಲ ನೀಡು ಸಾಕೂ

ಮುಂಜಾನೆ ಬೆಳಕಲಿ ಸ್ಮರಿಸು, ಸರಿ ರಾತ್ರಿ ಕನಸಲ್ಲಿ ಹರಿಸು
ಜಗವೆಲ್ಲಾ ಹೊಗಳುವ ವೇಳೆ, ಮನಸಲ್ಲಿ ನನ್ನನೆ ನೆನಸು

ದೇವರನ್ನೂ ... ಬೇಡುವಾಗ ನನ್ನ ಜಪಿಸು
ನಿನ್ನ ಎಲ್ಲಾ ... ಆಸೆಗಳ ಸಾಲಿನಲ್ಲಿ ಎಂದೂ ನನ್ನ ಮುಂದೆ ಇರಿಸು

ಅವರಿವರಾ ಜೊತೆ ಸೇರದೇ, ಅವರಿವರಾ ನುಡಿ ಕೇಳದೆ

... ♫ ♫ ♫ ♫ ...

1Repeated careful listening has not made me feel that the word could be ಕಾಯೋಹಾಗೆ, which would be somewhat more straightforward to accept.

No comments: