Friday, November 20, 2009

ಯಮನೆಲ್ಲಿ ಕಾಣೆನೆಂದು ಹೇಳಬೇಡ

This song was sung by someone in a recent gathering marking someone else's death. Its beauty, as I see it, is its ability to point out God's eternal presence supporting the life-death continuum. God underlies both life and death. If you know the Hindu puranic character pairs of ಯಮ-ರಾಮ, ವಿಭೀಷಣ-ರಾವಣ, ಅರ್ಜುನ-ಕೌರವ, ಉಗ್ರಸೇನ-ಕಂಸ and ಪ್ರಹ್ಲಾದ-ಹಿರಣ್ಯಕ, it will help in appreciating the lyrics a bit better.
[Prelude added on 22 August 2020]



ಆನೆಯು ಕರೆದರೆ ಆದಿಮೂಲ ಬಂದಂತೆ
ಅಜಮಿಳನು ಕರೆದರೆ ನಾರಾಯಣ ಬಂದಂತೆ
ಅಡವಿಯಲ್ಲಿ ಧೃವರಾಯ ಕರೆದರೆ ವಾಸುದೇವ ಬಂದಂತೆ
ಸಭೆಯಲ್ಲಿ ದ್ರೌಪದಿ ಕರೆದರೆ ಶ್ರೀಕೃಷ್ಣ ಬಂದಂತೆ 
ನಿನ್ನ ದಾಸರ ದಾಸನು ನಾ ಕರೆದರೆ ಎನ್ನ ಪಾಲಿಸಬೇಕು ಪುರಂದರ ವಿಠಲಾ

ಯಮನೆಲ್ಲಿ ಕಾಣೆನೆಂದು ಹೇಳಬೇಡ || ಪಲ್ಲವಿ ||
ಯಮನೇ ಶ್ರೀ ರಾಮನು ಸಂದೇಹ ಬೇಡ || ಅನುಪಲ್ಲವಿ ||
ನಂಬಿದ ವಿಭೀಷಣಗೆ ರಾಮನಾದ
ನಂಬದಿದ್ದ ರಾವಣಗೆ ಯಮನಾದ || ೧ ||
ನಂಬಿದ ಅರ್ಜುನನಿಗೆ ಬಂಟನಾದ
ನಂಬದಿದ್ದ ಕೌರವನಿಗೆ ಕಂಟಕನಾದ || ೨ ||
ನಂಬಿದ ಉಗ್ರಸೇನನಿಗೆ ಮಿತ್ರನಾದ
ನಂಬದಿದ್ದ ಕಂಸನಿಗೆ ಶತ್ರುವಾದ || ೩ ||
ನಂಬಿದ ಪ್ರಹ್ಲಾದನಿಗೆ ಹರಿಯಾದ
ನಂಬದಿದ್ದ ಹಿರಣ್ಯಕಗೆ ಅರಿಯಾದ || ೪ ||
ನಂಬಿದವರ ಸಲಹುವ ನಮ್ಮ ದೊರೆಯು
ಅಂಬುಜಾಕ್ಷ ಪುರಂದರ ವಿಠ್ಠಲರಾಯ || ೫ ||

No comments: