Friday, November 13, 2009

ಸದಾ ಎನ್ನ ಹೃದಯದಲ್ಲಿ ವಾಸಮಾಡೋ ಶ್ರೀಹರಿ

The poet wishes that God be with him, within his heart, always and elaborates on how he, the poet, would love to pray, and how he would not rest until God obliges or, equivalently, he is one with God.

The audio is presented by T N Gopalakrishnan.





ಸದಾ ಎನ್ನ ಹೃದಯದಲ್ಲಿ ವಾಸಮಾಡೋ ಶ್ರೀಹರಿ
ನಾದಮೂರ್ತಿ ನಿನ್ನ ಪಾದ ಮೋದದಿಂದ ಭಜಿಸುವೆ

ಜ್ಞಾನವೆಂಬೋ ನವರತ್ನದ ಮಂಟಪದ ಮಧ್ಯದಲ್ಲಿ
ಗಾನಲೋಲನ ಕುಳ್ಳಿರಿಸಿ ಧ್ಯಾನದಿಂದ ಭಜಿಸುವೆ

ಭಕ್ತಿರಸವೆಂಬೋ ಮುದ್ದು ಮಾಣಿಕ್ಯದ ಹರಿವಾಣದಿ
ಮುಕ್ತನಾಗಬೇಕು ಎಂದು ಮುತ್ತಿನಾರತಿ ಎತ್ತುವೆ

ನಿನ್ನ ನಾನು ಬಿಡುವನಲ್ಲ ಎನ್ನ ನೀನು ಬಿಡಲು ಸಲ್ಲ
ಪನ್ನಗ ಶಯನ ವಿಜಯ ವಿಠ್ಠಲ ನಿನ್ನ ಭಕ್ತರ ಕೇಳೋ ಸಲ್ಲ

No comments: