Sunday, March 01, 2015

ಕೃಷ್ಣನಾ ಕೊಳಲಿನಾ ಕರೆ

The mesmerizing sound of Lord Krishna's flute is described through the act of a housewife running towards the source of sound, abandoning the all-important house work ... That the raga ♫भैरवी, or ♫ಸಿಂಧು ಭೈರವಿ, has been chosen to bring out the lyrical essence visualized by the poet, ಪು ತಿ ನ, is noteworthy.

Acknowledgments are due to my dear friend, Alamelu Iyengar, the poet's daughter, for helping me present the correct lyrics. (Disclaimer: If mistakes still exist, you can attribute them to me, the blog post author).




... ♫ ♫ ♫ ♫ ...
ಕೃಷ್ಣನಾ ಕೊಳಲಿನಾ ಕರೆ, ಆಲಿಸು
ಕೃಷ್ಣನಾ ಕೊಳಲಿನಾ ಕರೆ
ತ್ವರೇ, ತ್ವರೇ ...

... ♫ ♫ ♫ ♫ ...
ತೊಟ್ಟಲಿನಾ ಹಸುಗೂಸಾ ಮರೇ ಮರೇ
ಪಕ್ಕಾದಾ ಗಂಡನಾ ತೊರೇ ತೊರೇ
ಬೃಂದಾವನಕೆ ... ತ್ವರೇ, ತ್ವರೇ
ಕೃಷ್ಣನಾ ಕೊಳಲಿನಾ ಕರೆ

... ♫ ♫ ♫ ♫ ...
ಮುತ್ತಿನ ಕುಪ್ಪುಸ ಹರಳೋಲೆ, ಮಲ್ಲಿಗೆ ಜಾಜಿ ಮುಡಿ ಮಾಲೆ
ಹೆಜ್ಜೆಯ ನೇವುರ ಗೆಜ್ಜೆಯ ಪಿಲ್ಲಿ
ಮರೆತೇ ಬಂದೆವೆ ಮನೆಯಲ್ಲೇ ಸಖಿ
ಕೃಷ್ಣನಾ ಕೊಳಲಿನಾ ಕರೆ

... ♫ ♫ ♫ ♫ ...
ಹೊತ್ತಾರೆ ಹೊರೆಗೆಲಸ ಮಿಕ್ಕಾರೆ ಮಿಗಲಿ
ಪಕ್ಕಾದಾ ನೆರೆಹೊರೆ ನಕ್ಕರೆ ನಗಲಿ
ಬೃಂದಾವನದೊಳಾಲಿಸಿಗೋ1 ಮುರಳೀ
ಕೃಷ್ಣನಾ ಕೊಳಲಿನಾ ಕರೆ

... ♫ ♫ ♫ ♫ ...
ನೇಸರ ಕಿರಣ ಆಗಸದಿರುಳಾ ತೊರೆಯಿಸುವ ರೀತಿ
ಮುರಳೀಧರನಾ ಮುರಳೀ ಮಾಯೆಗೆ ಮನ ಬಿಟ್ಟಿತೆ ಭೀತಿ
ಇನ್ನಾಯಿತೆ ಪ್ರೀತಿ, ಇನ್ನಾಯಿತೆ ಪ್ರೀತಿ
ಕೃಷ್ಣನಾ ಕೊಳಲಿನಾ ಕರೆ

1ಬೃಂದಾವನದೊಳಾಲಿಸಿಗೋ = ಬೃಂದಾವನದೊಳ್ + ಆಲಿಸು + ಇಗೋ

No comments: