Thursday, February 14, 2013

ಮನಸೇ ಒಂದು ಸಾರಿ ಕೇಳು

Although there is not yet a full music video of this song on the web, you can understand that the lovers are trying to express their love for each other. The girl is so confident of the boy's love that she even declares, translated:

... In every birth, I'd pray to God that you be my lover ...

Happy Valentine's Day.




... ♫ ♫ ♫ ♫ ...
[ಮನಸೇ ಒಂದು ಸಾರಿ ಕೇಳು
ಒಲವೇ ಒಂದು ಬಾರಿ ಹೇಳು
ಮನದಾ ಆಸೆ ನೂರು ನೂರು
ಕಣ್ಣಾ ಭಾಷೆ ಸಾವಿರಾರು] - ೨
[ಎಂದೋ ಎಲ್ಲೋ ಕೇಳಿದಂತಾ ಸಂಗಾತಿ ಹಾಡು
ಮತ್ತೊಮ್ಮೆ ದಯಮಾಡಿ ಹೇಳು, ಗೆಳೆಯ, ಈ ಹಾಡು] - ೨
ಮನಸೇ ಒಂದು ಸಾರಿ ಕೇಳು
ಒಲವೇ ಒಂದು ಬಾರಿ ಹೇಳು
ಮನದಾ ಆಸೆ ನೂರು ನೂರು
ಕಣ್ಣಾ ಭಾಷೆ ಸಾವಿರಾರು

... ♫ ♫ ♫ ♫ ...
ಕನಸ ಕಡಲಿನಲ್ಲಿ ನಾನು ತೇಲಿ ಬಂದೆ
ನನ್ನ ಪ್ರೀತಿ ನಾವಿಕ ನಿನ್ನ ಕಾಣಲೂ
ಹೃದಯ ತೀರದಲ್ಲಿ ನಾನು ಬಂದು ನಿಂತೇ
ನನ್ನ ಪ್ರೀತಿ ಸಾರಿಕಾ ನಿನ್ನ ಸೇರಲೂ
ಒಂದೊಂದು ಕ್ಷಣವೂ ನಿನ್ನಿಂದ ದೂರಾ
ನಿನಗಾಗಿ ನಾನು ಏನು ಬೆಂದೆನೂ
ಎದೆಯಾ ಗೂಡಲೀ ಪುಟ್ಟ ಮನೆ ಮಾಡುವೆ
ಉಸಿರಾ ಬರದಲಿ ಜೋಗುಳ ಹಾಡುವೆ

... ♫ ♫ ♫ ♫ ...
ಹೊಸದಾದ ಒಂದು ಜಗವನ್ನೇ ಇಂದು
ನನಗಾಗಿ ನೀನು ಸೃಷ್ಟಿ ಮಾಡಿದೆ
ಹೇಳಲಾರೆ ಏನು ನನ್ನ ಜಗವೇ ನೀನು
ನಿನ್ನನ್ನು ಪಡೆಯಲು ಅದೃಷ್ಟ ಮಾಡಿದೆ
ಪ್ರತಿ ಜನ್ಮದಲ್ಲೂ ನಿನ್ನೊಲುವ ಬಯಸಿ
ಆ ದೇವರನ್ನು ಪ್ರಾರ್ಥಿಸುವೆನು
ನಿನ್ನ ಈ ಮಾತಿಗೆ ನಾ ಋಣಿಯಾದೆನು
ನಿನ್ನ ಈ ಪ್ರೀತಿಗೆ ನಾ ಶರಣಾದೆನು
ಲಾ ಲ ಲಾ ಲ ಲಾ ಲ ಲಾ ಲ
ಮನಸೇ ಒಂದು ಸಾರಿ ಕೇಳು
ಲಾ ಲ ಲಾ ಲ ಲಾ ಲ ಲಾ ಲ
ಒಲವೇ ಒಂದು ಬಾರಿ ಹೇಳು
ಮನದಾ ಆಸೆ ನೂರು ನೂರು
ಕಣ್ಣಾ ಭಾಷೆ ಸಾವಿರಾರು

No comments: