Saturday, January 05, 2013

ಸತ್ಯವಂತರಿಗೆ ಇದು ಕಾಲವಲ್ಲ

This song is a somewhat cynical view of life, as seen through the eyes of ಪುರಂದರದಾಸ, the 16th century poet & philosopher. The title of the song can be translated literally as:

This is not the time for truthful people ...

The song elaborates on how unrighteous people end up enjoying comfortable life, and the righteous end up suffering in their life. Perhaps this situation was more seen frequently during his lifetime, and produced the cynical outlook captured in this song.

The song's special significance for me is that I used to hear it, quite regularly, from my late paternal grandmother.

(It appears that this song can be rendered in different ragas; the video by D K Pattammal is in ♫भैरवी).




... ♫ ♫ ♫ ♫ ...
ಸತ್ಯವಂತರಿಗೆ ಇದು ಕಾಲವಲ್ಲ
ದುಷ್ಟ ಜನರಿಗೆ, ಇದು, ಸುಭಿಕ್ಷೆಯೇ ಕಾಲ

... ♫ ♫ ♫ ♫ ...
ಹರಿಸ್ಮರಣೆ ಮಾಡುವಗೆ ಕ್ಷಯವಾಗುವ ಕಾಲ
ಪರಮ ಪಾಪಿಗಳಿಗೆ ಸುಭಿಕ್ಷ ಕಾಲ
ಸ್ಥಿರವಾದ ಪತಿವ್ರತೆಯ ಪರರು ನಿಂದಿಪ ಕಾಲ
ಧರೆಯರಿಯೆ ಜಾರೆಯನು ಕೊಂಡಾಡುವ ಕಾಲ

... ♫ ♫ ♫ ♫ ...
ಉಪಕಾರ ಮಾಡಿದರೆ ಅಪಕರಿಸುವ ಕಾಲ
ಸಕಲವನು ತಿಳಿದವಗೆ ದುರ್ಭಿಕ್ಷ ಕಾಲ
ಸತಿಸುತರು ಎಂಬವರ ನಂಬಲರಿಯದ ಕಾಲ
ಸತೆಯಲ್ಲವಿದು ಬಹು ವಿಪರೀತ ಕಾಲ

... ♫ ♫ ♫ ♫ ...
ಧರ್ಮ ಮಾಡುವವ ನಿರ್ಮೂಲವಾಗುವ ಕಾಲ
ಕರ್ಮಿ ಪಾತಕರಿಗೆ ಬಹು ಸೌಖ್ಯ ಕಾಲ
ನಿರ್ಮಲಾತ್ಮಕ ಶ್ರೀ ಪುರಂದರ ವಿಠಲನ
ಮರ್ಮದೊಳು ಭಜಿಸಲರಿಯದ ಕಾಲವಯ್ಯ

No comments: