Tuesday, January 12, 2010

ಕರುಣಿಸೋ ರಂಗಾ ... ಹಗಲು ಇರುಳು ನಿನ್ನ ಸ್ಮರಣೆಯ ಮರೆಯದಂತೆ

The poet sings that, although he does not have the many good characters of various [mythological] personalities before him, he wishes to plead only one thing: ಹಗಲು ಇರುಳು ನಿನ್ನ ಸ್ಮರಣೆಯ ಮರೆಯದಂತೆ, ಕರುಣಿಸೋ ರಂಗಾ.

In other words, he appeals to God that He grant him the ability to remember, or be aware of, Him day and night.





ಕರುಣಿಸೋ ರಂಗಾ ಕರುಣಿಸೋ
ಕರುಣಿಸೋ ರಂಗಾ ಕರುಣಿಸೋ
ಹಗಲು ಇರುಳು ನಿನ್ನಾ ಸ್ಮರಣೆಯ ಮರೆಯದಂತೆ || ಕರುಣಿಸೋ ||

ರುಕುಮಾಂಗದನಂತೆ ವೃತವ ನಾನರಿಯೆ
ಶುಕ ಮುನಿಯಂತೆ ಸ್ತುತಿಸಲು ಅರಿಯೆ
ಬಕವೈರಿಯಂತೆ ಧ್ಯಾನವ ಮಾಡಲರಿಯೆ
ದೇವಕಿಯಂತೆ ಮುದ್ದಿಸಲು ಅರಿಯೆ, ಕೃಷ್ಣಾ || ಕರುಣಿಸೋ ||

ಗರುಡನಂದದಿ ಪೊತ್ತು ತಿರುಗಲರಿಯೆ
ಕರೆಯಲು ಅರಿಯೆ ಕರಿ ರಾಜನಂತೆ
ವರ ಕಪಿಯಂತೆ ದಾಸ್ಯವ ಮಾಡಲರಿಯೆ
ಸಿರಿಯಂತೆ ನೆರೆದು ಮೋಹಿಸಲು ಅರಿಯೆ, ಕೃಷ್ಣಾ || ಕರುಣಿಸೋ ||

ಬಲಿಯಂತೆ ದಾನವ ಕೊಡಲು ಅರಿಯೆ
ಭಕ್ತಿ, ಛಲವನು ಅರಿಯೆ ಪ್ರಹ್ಲಾದನಂತೆ
ವರಿಸಲು ಅರಿಯೆ ಅರ್ಜುನನಂತೆ ಸಖನಾಗಿ
ಸಲಹೋ ದೇವರ ದೇವಾ ಸಲಹೋ ದೇವರ ದೇವಾ
ಪುರಂದರ ವಿಠ್ಠಲ ಶ್ರೀ ಪುರಂದರ ವಿಠ್ಠಲ || ಕರುಣಿಸೋ ||