Sunday, May 30, 2010

ನಿನ್ನ ನೋಡಲೆಂತೋ, ಮಾತನಾಡಲೆಂತೋ

The lovers sing to each other [in their imagination] about their inability to profess their love to each other. A melodious song number is a mechanism Indian directors use rather well to make their point. Shreya Ghoshal is superb in this number.






[Male]
ನಿನ್ನ ನೋಡಲೆಂತೋ, ಮಾತನಾಡಲೆಂತೋ
ಮನಸ ಕೇಳಲೆಂತೋ, ಪ್ರೀತಿ ಹೇಳಲೆಂತೋ
ಆಹಾ ಒಂಥರಾ ಥರಾ,
ಹೇಳಲೊಂಥರಾ ಥರಾ, ಕೇಳಲೊಂಥರಾ ಥರಾ

[Female]
ನಿನ್ನ ನೋಡಲೆಂತೋ, ಮಾತನಾಡಲೆಂತೋ
ಮನಸ ಕೇಳಲೆಂತೋ, ಪ್ರೀತಿ ಹೇಳಲೆಂತೋ
ಆಹಾ ಒಂಥರಾ ಥರಾ,
ಹೇಳಲೊಂಥರಾ ಥರಾ, ಕೇಳಲೊಂಥರಾ ಥರಾ

ಹೋ ... ಕಣ್ಣಿಗೇನೂ ಕಾಣದೇ, ಸ್ಪರ್ಶವೇನೂ ಇಲ್ಲದೇ
ಏನೋ ನನ್ನ ಕಾಡಿದೇ, ಏನೂ ಅರ್ಥವಾಗದೇ
[Male]
ಹಗಲು ರಾತ್ರಿ ನಿನ್ನದೇ, ನೂರು ನೆನಪು ಮೂಡಿದೇ
ನನ್ನಲೇನೋ ಆಗಿದೇ, ಹೇಳಲೇನೂ ಆಗದೇ
ಮನಸು ಮಾಯವೆಂತೋ
[Female]
ಮಧುರ ಭಾವವೆಂತೋ
[Male]
ಪಯಣ ಎಲ್ಲಿಗೆಂತೋ
[Female]
ನಯನ ಸೇರಲೆಂತೋ
[Male]
ಮಿಲನವಾಗಲೆಂತೋ,
[Female]
ಗಗನ ಎಲ್ಲೋ ಎಂತೋ
[Male]
ಆಹಾ ಒಂಥರಾ ಥರಾ,
[Female]
ಹೇಳಲೊಂಥರಾ ಥರಾ, ಕೇಳಲೊಂಥರಾ ಥರಾ
[Male]
ಹೇಳಲೊಂಥರಾ ಥರಾ, ಕೇಳಲೊಂಥರಾ ಥರಾ

[Male]
ಮೆಲ್ಲ ಮೆಲ್ಲ ಮೆಲ್ಲುವಾ, ಸನ್ನೆಯಲ್ಲೇ ಕೊಲ್ಲುವಾ
ಸದ್ದೇ ಇರದ ಉತ್ಸವಾ, ಪ್ರೀತಿಯೊಂದೇ ಇಲ್ಲವಾ
[Female]
ಘಲ್ಲು ಘಲ್ಲು ಎನ್ನುವಾ, ಹೃದಯ ಗೆಜ್ಜೆ ನಾದವಾ
ಪ್ರೀತಿ ತಂದ ರಾಗವಾ, ತಾಳಲೆಂತು ಭಾವವಾ
ಹೃದಯದಲ್ಲಿ ಇಂತೋ
[Male]
ಉದಯವಾಯಿತೆಂತೋ
[Female]
ಸನಿಹವಾಗಲೆಂತೋ
[Male]
ಕನಸ ಕಾಣಲೆಂತೋ
[Female]
ಹರುಷ ಏನೋ ಎಂತೋ
[Male]
ಸೊಗಸ ಹೇಳಲೆಂತೋ
[Female]
ಆಹಾ ಒಂಥರಾ ಥರಾ,
[Male]
ಹೇಳಲೊಂಥರಾ ಥರಾ, ಕೇಳಲೊಂಥರಾ ಥರಾ
[Female]
ಹೇಳಲೊಂಥರಾ ಥರಾ, ಕೇಳಲೊಂಥರಾ ಥರಾ
[Male]
ಹೇಳಲೊಂಥರಾ ಥರಾ, ಕೇಳಲೊಂಥರಾ ಥರಾ

No comments: