The poet, Kanaka Dasa, recalls how an individual can easily do various things:
- Abandon parents in pursuit of penance, i.e., a determined undertaking
- Avoid relatives
- A king, if required, can let go of his kingdom
- Can avoid eating even when he is hungry
- Let go of assets acquired
- Leave wife and children
- Can even pay with one's life
- Can lower the head in shame
ತೊರೆದು ಜೀವಿಸಬಹುದೇ ಹರಿ ನಿನ್ನ ಚರಣವ
ಮರೆಯ ಮಾತೇಕಿನ್ನು ಅರಿತು ಪೇಳುವೆನಯ್ಯ || ಪಲ್ಲವಿ ||
ತಾಯಿ ತಂದೆಯ ಬಿಟ್ಟು ತಪವ ಮಾಡಲುಬಹುದು
ದಾಯಾದಿ ಬಂಧುಗಳ ಬಿಡಲುಬಹುದು
ರಾಯ ತಾ ಮುನಿದರೆ ರಾಜ್ಯವನು ಬಿಡಬಹುದು
ಕಾಯ ಜನಪಿತ ನಿನ್ನಡಿಯ ಬಿಡಲಾಗದು || ೧ ||
ಒಡಲು ಹಸಿಯಲು ಅನ್ನವಿಲ್ಲದೆ ಇರಬಹುದು
ಪಡೆದ ಕ್ಷೇತ್ರವ ಬಿಟ್ಟು ಪೋಗಬಹುದು
ಮಡದಿ ಮಕ್ಕಳ ಕಡೆಗೆ ತೊಲಗಿಸಿಯೆ ಬಿಡಬಹುದು
ಕಡಲೊಡೆಯ ನಿನ್ನಡಿಯ ಗಳಿಗೆ ಬಿಡಲಾಗದು || ೨ ||
ಪ್ರಾಣವನು ಪರರು ಬೇಡಿದರೆತ್ತಿಕೊಡಬಹುದು
ಮಾನದಲಿ ಮನವ ತಗ್ಗಿಸಲುಬಹುದು
ಪ್ರಾಣನಾಯಕನಾದ ಆದಿಕೇಶವರಾಯ
ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು || ೩ ||
1 comment:
Another, complete, rendering of the song is by Pt. M Venkatesh Kumar: https://www.youtube.com/watch?v=N5eeahOzFdo
Post a Comment