The man sings in effect that his love her is so great that even God might get angry or jealous ...
ಎಲ್ಲೋ ಮಳೆಯಾಗಿದೆ ಎಂದು ತಂಗಾಳಿಯು ಹೇಳುತಿದೆ
ಇಲ್ಲೇ ಒಲವಾಗಿದೆ ಎಂದು ಕನಸೊಂದು ಬೀಳುತಿದೆ
ವ್ಯಾಮೋಹವ ಕೇವಲ ಮಾತಿನಲಿ ಹೇಳಲು ಬರಬಹುದೇ?
ನಿನ್ನ ನೋಡಿದ ಮೇಲೆಯೂ ಪ್ರೀತಿಯಲಿ ಬೀಳದೆ ಇರಬಹುದೇ?
ಎಲ್ಲೋ ಮಳೆಯಾಗಿದೆ ಎಂದು ತಂಗಾಳಿಯು ಹೇಳುತಿದೆ
... ♫ ♫ ♫ ♫ ...
ಕಣ್ಣಲಿ ಮೂಡಿದೆ ಹನಿಗವನ, ಕಾಯಿಸಿ ನೀ ಕಾಡಿದರೆ
ನೂತನ ಭಾವದ ಆಗಮನ, ನೀ ಬಿಡದೇ ನೋಡಿದರೆ
ನಿನ್ನ ಗಾನದಿ, ನಿನ್ನದೇ ತೋಳಿನಲಿ, ಹೀಗೆಯೇ ಇರಬಹುದೇ?
ಈ ಧ್ಯಾನವ ಕಂಡರೆ ದೇವರಿಗೂ ಕೋಪವು ಬರಬಹುದೇ?
ಎಲ್ಲೋ ಮಳೆಯಾಗಿದೆ ಎಂದು ತಂಗಾಳಿಯು ಹೇಳುತಿದೆ
ಇಲ್ಲೇ ಒಲವಾಗಿದೆ ಎಂದು ಕನಸೊಂದು ಬೀಳುತಿದೆ
... ♫ ♫ ♫ ♫ ...
ನೆನಪಿನ ಹೂಗಳ ಬೀಸಣಿಗೆ, ನೀ ಬರುವಾ ದಾರಿಯಲಿ
ಓಡಿದೆ ದೂರಕೆ ಬೇಸರಿಕೆ, ನೀನಿರುವಾ ಊರಿನಲೀ
ಅನುಮಾನವೇ ಇಲ್ಲದೆ ಕನಸಿನಲಿ ಮೆಲ್ಲಗೆ ಬರಬಹುದೇ?
ಅಲೆಮಾರಿಯ ಹೃದಯದ ಡೇರೆಯಲಿ ನೀನು ಇರಬಹುದೇ?
ಎಲ್ಲೋ ಮಳೆಯಾಗಿದೆ ಎಂದು ತಂಗಾಳಿಯು ಹೇಳುತಿದೆ
ಇಲ್ಲೇ ಒಲವಾಗಿದೆ ಎಂದು ಕನಸೊಂದು ಬೀಳುತಿದೆ
ವ್ಯಾಮೋಹವ ಕೇವಲ ಮಾತಿನಲಿ ಹೇಳಲು ಬರಬಹುದೇ?
ನಿನ್ನ ನೋಡಿದ ಮೇಲೆಯೂ ಪ್ರೀತಿಯಲಿ ಬೀಳದೆ ಇರಬಹುದೇ?
ಎಲ್ಲೋ ಮಳೆಯಾಗಿದೆ ಎಂದು ತಂಗಾಳಿಯು ಹೇಳುತಿದೆ
Music, when the lyrics describe some purposeful emotion or thought. These posts are in a mix of English/Hindi or English/Kannada pairs. With the advent of Google's transliteration, it is unnecessary to have inconsistent and misleading hand-crafted English transliterations of originals, for Hindi and Kannada in this blog's case. [If a transliteration is required, it can always be produced by software]. Hindustani ragas are shown in Devanagari, e.g., ♫देश; Carnatic, in Kannada, e.g., ♫ಖರಹರಪ್ರಿಯ.
Tuesday, December 29, 2009
ಎಲ್ಲೋ ಮಳೆಯಾಗಿದೆ ಎಂದು ತಂಗಾಳಿಯು ಹೇಳುತಿದೆ
Labels:
2009,
K,
Lover,
सोनू निगम,
ಐಂದ್ರಿತಾ,
ಜಯಂತ ಕಾಯ್ಕಿಣಿ,
ದಿಗಂತ್,
ಮನಸಾರೆ,
ಮನೋ ಮೂರ್ತಿ
Subscribe to:
Post Comments (Atom)
No comments:
Post a Comment