This is a nice arati song. Stumbled on to the a video through a Google search of "Kannada Lakshmi aarti song". The lyrics are also available in a PDF form, crafted by Meera Subbarao.
... ♫ ♫ ♫ ♫ ...
... ♫ ♫ ♫ ♫ ...
... ♫ ♫ ♫ ♫ ...
... ♫ ♫ ♫ ♫ ...
... ♫ ♫ ♫ ♫ ...
... ♫ ♫ ♫ ♫ ...
ಮಂಗಳಾರತಿ ತಂದು ಬೆಳಗಿರೆ ಅಂಬುಜಾಸನ ರಾಣಿಗೆ
ಅಂಬೆಗೆ ಜಗದಾಂಬೆಗೆ ಮೂಕಾಂಬೆಗೆ ಶಶಿಬಿಂಬೆಗೆ
ಅಂಬೆಗೆ ಜಗದಾಂಬೆಗೆ ಮೂಕಾಂಬೆಗೆ ಶಶಿಬಿಂಬೆಗೆ
... ♫ ♫ ♫ ♫ ...
ಶುಧ್ಧ ಸ್ನಾನವ ಮಾಡಿ ನದಿಯಲಿ ವಜ್ರಪೀಠದಿ ನೆಲೆಸಿರೆ
ತಿದ್ದಿ ತಿಲಕವ ತೀಡಿದಂಥ ಮುದ್ದು ಮಂಗಳ ಗೌರಿಗೆ
ತಿದ್ದಿ ತಿಲಕವ ತೀಡಿದಂಥ ಮುದ್ದು ಮಂಗಳ ಗೌರಿಗೆ
... ♫ ♫ ♫ ♫ ...
ಎರೆದು ಪೀತಾಂಬರವನುಡಿಸಿ ಸರ್ವಾಭರಣವ ರಚಿಸಿದ
ಹರಳಿನೋಲೆ ವಜ್ರಮೂಗುತಿ ವರಮಹಾಲಕ್ಷ್ಮಿ ದೇವಿಗೆ
ಹರಳಿನೋಲೆ ವಜ್ರಮೂಗುತಿ ವರಮಹಾಲಕ್ಷ್ಮಿ ದೇವಿಗೆ
... ♫ ♫ ♫ ♫ ...
ನಿಗಮ ವೇದ್ಯಳೇ ನಿನ್ನ ಗುಣಗಳ ಬಗೆಬಗೆಯಲಿ ವರ್ಣಿಪೆ
ತೆಗೆದು ಭಾಗ್ಯವ ನೀಡು ಎನುತ ಜಗದೊಡೆಯನ ಮಡದಿಗೆ
ತೆಗೆದು ಭಾಗ್ಯವ ನೀಡು ಎನುತ ಜಗದೊಡೆಯನ ಮಡದಿಗೆ
... ♫ ♫ ♫ ♫ ...
ಹುಟ್ಟುಬಡವೆಯ ಕಷ್ಟಕಳೆದು ಕೊಟ್ಟಳರಸನ ಸಿರಿಯನು
ಹೆತ್ತ ಕುಮಾರನ ತೋರಿದಂಥ ಶುಕ್ರವಾರದ ಲಕ್ಷ್ಮಿಗೆ
ಹೆತ್ತ ಕುಮಾರನ ತೋರಿದಂಥ ಶುಕ್ರವಾರದ ಲಕ್ಷ್ಮಿಗೆ
No comments:
Post a Comment