Tuesday, July 27, 2010

ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೇ?

I recall having heard this song when I was an youngster in India. Although I don't remember having seen the movie, it seems that the singer is recalling how fate has worked its ways against his wishes.

I have reconstructed the lyrics by listening to the audio/video.





ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೇ?
ತಂತಿ ಹರಿದ ವೀಣೆಯಿಂದ ನಾದ ಹರಿಯಬಲ್ಲದೇ?
ಮನಸು ಕಂಡ ಆಸೆಯೆಲ್ಲಾ ಕನಸಿನಂತೆ ಕರಗಿತಲ್ಲಾ
ಉಲ್ಲಾಸ ಇನ್ನೆಲ್ಲಿದೇ ...
ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೇ

ಹಣತೆಯಲ್ಲಿ ದೀಪ ಉರಿಯೆ ಬೆಳಕಿನಲ್ಲಿ ಬಾಳುವೆ
ಧರೆಯೇ ಹತ್ತಿ ಉರಿಯುವಾಗ ಬದುಕಲೆಲ್ಲಿ ಓಡುವೆ?
ತಂತಿ ಹರಿದ ವೀಣೆಯಿಂದ ನಾದ ಹರಿಯಬಲ್ಲದೇ?
ಮನಸು ಕಂಡ ಆಸೆಯೆಲ್ಲಾ ಕನಸಿನಂತೆ ಕರಗಿತಲ್ಲಾ
ಉಲ್ಲಾಸ ಇನ್ನೆಲ್ಲಿದೇ ...
ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೇ

ನೀರಿನಲ್ಲಿ ದೋಣಿ ಮುಳುಗೆ ಈಜಿ ದಡವ ಸೇರುವೆ
ಸುಳಿಗೆ ದೋಣಿ ಸಿಲುಕಿದಾಗ ಬದುಕಿ ಬರಲು ಸಾಧ್ಯವೇ?
ಬಾಳ ಪಗಡೆ ಆಟದಲ್ಲಿ ಬರಿಯ ಕಾಯಿ ಎಲ್ಲರೂ
ನಡಿಸುವಾಗ ಬೇರೆ ಅವನ ಇಚ್ಛೆ ಯಾರೂ ಬಲ್ಲರೂ

No comments: